ಆದ್ಯ ಕೆ ಎಂ ಚೈತನ್ಯ ನಿರ್ದೇಶನದ 2020 ರ ಕನ್ನಡ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದರಲ್ಲಿ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಜೊತೆಗೆ ಸಂಗೀತಾ ಭಟ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ರವಿಶಂಕರ್ ಗೌಡ ಮತ್ತು ಶಶಾಂಕ್ ಪುರುಷೋತ್ತಮ್ ಇದ್ದಾರೆ. ಚಿತ್ರಕ್ಕೆ ಸಂಗೀತ ಶ್ರೀಧರ್ ವಿ ಸಂಭ್ರಮ್ ಅವರದು ಮತ್ತು ಛಾಯಾಗ್ರಹಣ ವಿ ಮಲ್ಹಾರ್ ಭಟ್ ಜೋಶಿ ಅವರದ್ದು. ಈ ಚಿತ್ರವು ರವಿಕಾಂತ್ ಪೆರೆಪು ನಿರ್ದೇಶನದ 2016 ರ ತೆಲುಗು ಚಲನಚಿತ್ರ ಕ್ಷಣಂನ ಅಧಿಕೃತ ರಿಮೇಕ್ ಆಗಿದೆ. == ಪಾತ್ರವರ್ಗ == ಆದಿತ್ಯ ಶಂಕರ್ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಎಸಿಪಿ ಶ್ರುತಿ ನಾಯಕ್ ಪಾತ್ರದಲ್ಲಿ ಶ್ರುತಿ ಹರಿಹರನ್ ಸಂಗೀತಾ ಭಟ್ ಸಂಗೀತಾ ರವಿಶಂಕರ್ ಗೌಡ ಶಶಾಂಕ್ ಪುರುಷೋತ್ತಮ್ == ಹಿನ್ನೆಲೆಸಂಗೀತ == ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಪಥವನ್ನು ಶ್ರೀಧರ್ ವಿ ಸಂಭ್ರಮ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಪಡೆದುಕೊಂಡಿದೆ . == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಆದ್ಯಾ @ ಐ ಎಮ್ ಡಿ ಬಿ